ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪಿಕೆಎಲ್ 2021: ತಮಿಳು ತಲೈವಾಸ್ ಗುದ್ದಿ ಕೆಡವಿದ ಬೆಂಗಳೂರು ಬುಲ್ಸ್!
ಆರಂಭಿಕ ಪಂದ್ಯದಲ್ಲಿ ಮಂಕಾಗಿದ್ದಂತೆ ಕಂಡ ಬೆಂಗಳೂರು ಬುಲ್ಸ್ ನಾಯಕ
ಪವನ್ ಕುಮಾರ್ ಶೆಹ್ರಾವತ್ ಈ ಪಂದ್ಯದಲ್ಲಿ ಕೊಂಚ ಚೇತರಿಕೆಯ ಆಟ ನೀಡಿದ್ದು ಕಂಡುಬಂತು. ಪವನ್ 9 ರೈಡ್
ಪಾಯಿಂಟ್ಸ್ ಸೇರಿಸಿದರೆ ಮತ್ತೊಬ್ಬ ಆಟಗಾರ ಚಂದ್ರನ್ ರಂಜಿತ್ 7 ಅಂಕಗಳ ಕೊಡುಗೆ ನೀಡಿದರು. ಇನ್ನು
ಬುಲ್ಸ್ ನಿಂದ ಸೌರಭ್ ನಂದಲ್ 5, ಭರತ್ 5, ಅಮನ್ 3, ಮಯೂರ್ ಕದಮ್ 3, ಮಹೇಂದರ್ ಸಿಂಗ್ 1 ಅಂಕ ಕಲೆ
ಹಾಕಿದರು.
ತಮಿಳ್ ತಲೈವಾಸ್ ಪರ ಭವಾನಿ ರಜಪೂತ್ 8, ಸಾಗರ್ 5, ಮಂಜೀತ್ 4, ಸುರ್ಜೀತ್
ಸಿಂಗ್ 3, ಕೆ ಪ್ರಪಂಜನ್ 3, ಮೋಹಿತ್ 2, ಸಾಹಿಲ್ ಸಿಂಗ್ 1, ಹಿಮಾಂಶು 1 ಅಂಕಗಳ ಕೊಡುಗೆ ನೀಡಿದರು.
ಪಂದ್ಯದ ಆರಂಭದಲ್ಲಿ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿಯ ಆಟ ನಡೆಯಿತಾದರೂ ಫಸ್ಟ್ ಹಾಫ್ ವೇಳೆ ಬುಲ್ಸ್
ಲೀಡ್ ಪಡೆದುಕೊಳ್ಳಲಾರಂಭಿಸಿತ್ತು. ಅಂತಿಮವಾಗಿ 8 ಅಂಕಗಳ ಅಂತರದಿಂದ ಬೆಂಗಳೂರು ತಂಡ ಸೀಸನ್ ನ ಚೊಚ್ಚಲ
ಗೆಲುವು ದಾಖಲಿಸಿದೆ.
ಈ ಪಂದ್ಯದ ಬಳಿಕ ಬೆಂಗಳೂರು ಬುಲ್ಸ್ ತಂಡ 2 ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ
5 ಅಂಕ ಕಲೆ ಹಾಕಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ ಬೆಂಗಳೂರು 6ನೇ ಸ್ಥಾನದಲ್ಲಿದೆ. ಆಡಿರುವ 2 ಪಂದ್ಯಗಳಲ್ಲಿ
ಎರಡೂ ಪಂದ್ಯ ಗೆದ್ದಿರುವ ದಬಾಂಗ್ ಡೆಲ್ಲಿ ತಂಡ 10 ಪಾಯಿಂಟ್ಸ್ ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ